*ಬಹಳ ಸುಲಭವಾಗಿ ಸಾಧ್ಯವಾಗುವಂಥದ್ದು
ಅವನಿಗೇನಪ್ಪ ಎಲ್ಲವೂ `
` ಕರತಲಾಮಲಕ’ ಎಂದು ಹೇಳುತ್ತಾರೆ. ಇದನ್ನೇ ಕನ್ನಡದಲ್ಲಿ ಬಹಳ ಪ್ರೀತಿ ಉಳ್ಳವರು ಅವನಿಗೆ ಎಲ್ಲವೂ `ಅಂಗೈ ನೆಲ್ಲಿಕಾಯಿ’ ಎಂದು ಹೇಳುತ್ತಾರೆ.ನೀರು ಕುಡಿದಷ್ಟು ಸುಲಭ' ಎಂದು ಸಾಮಾನ್ಯರು ಹೇಳುತ್ತಾರೆ. ಅದನ್ನೇ ಪಂಡಿತರು, ಅವನಿಗೆ ಎಲ್ಲವೂ
ಕರತಲಾಮಲಕ ಎನ್ನುವುದು ಸಂಸ್ಕೃತ ನುಡಿ. ಕರತಲ ಎಂದರೆ ಅಂಗೈ. ಅಮಲಕ ಎಂದರೆ ನೆಲ್ಲಿಕಾಯಿ.
ನೆಲ್ಲಿಕಾಯಿ ಸುಲಭದಲ್ಲಿ ಸಿಗುವಂಥದ್ದೆ? ಅಲ್ಲವೇ ಅಲ್ಲ. ಕಾಡಿಗೆ ಹೋಗಬೇಕು. ಕಲ್ಲು ಮುಳ್ಳು ತುಳಿದು ಮರ ಏರಿ ಅದನ್ನು ಕಿತ್ತು ತರುವವರೆಗೆ ಸುಸ್ತು ಹೊಡೆದಿರುತ್ತೀರಿ. ಅಂಥ ನೆಲ್ಲಿಕಾಯಿ ಅಂಗೈಯಲ್ಲಿಯೇ ಇದೆ ಅಂದರೆ? ಕಷ್ಟದಲ್ಲಿ ಸಿಗುವಂಥದ್ದೂ ಇವನಿಗೆ ಸುಲಭಸಾಧ್ಯವಾಗಿದೆ ಎಂಬ ಭಾವ ಇಲ್ಲಿಯದು.
ಒಬ್ಬರ ಸಾಮರ್ಥ್ಯವನ್ನು ಹೊಗಳುವಾಗ ಈ ಮಾತು ಸಾಮಾನ್ಯವಾಗಿ ಬಳಕೆಯಾಗುತ್ತದೆ. ಅಂದಹಾಗೆ ನೆಲ್ಲಿಕಾಯಿ ಆರೋಗ್ಯಕ್ಕೆ ಅತ್ಯುತ್ತಮ. ಔಷಧವಾಗಿಯೂ ಇದು ಬಳಕೆಯಾಗುತ್ತದೆ.
ನಾನು ವಾಸುದೇವ ಶೆಟ್ಟಿ. ನನ್ನೂರು ಹೊನ್ನಾವರ ತಾಲೂಕಿನ ಜಲವಳ್ಳಿ. 5ನೆ ತರಗತಿಯ ವರೆಗೆ ನಮ್ಮೂರಿನ ಶಾಲೆಯಲ್ಲಿಯೇ ಓದಿದೆ. ನಂತರ ಹೊನ್ನಾವರದ ನ್ಯೂ ಇಂಗ್ಲಿಷ್ ಸ್ಕೂಲ್ನಲ್ಲಿ 10ನೆ ತರಗತಿಯ ವರೆಗೆ. ಹೊನ್ನಾವರದ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ. ಧಾರವಾಡದ ಕವಿವಿಯಲ್ಲಿ ಕನ್ನಡದಲ್ಲಿ ಎಂ.ಎ. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಪತ್ರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಪಿಎಚ್.ಡಿ ಪದವಿ. ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಮೂರು ವರ್ಷ ಅರೆಕಾಲಿಕ ಉಪನ್ಯಾಸಕ. ಹಾಗೆಯೇ ಕಾರವಾರದ ಸರ್ಕಾರಿ ಕಲಾ ವಿಜ್ಞಾನ ಕಾಲೇಜಿನಲ್ಲೂ ಒಂದು ವರ್ಷ ಉಪನ್ಯಾಸಕನಾಗಿ ಸೇವೆ. ಬಳಿಕ ಎರಡು ವರ್ಷ ಊರಿನಲ್ಲಿ ವ್ಯವಸಾಯ. ನಡುವೆ 1989ರಲ್ಲಿ ಸರೋಜಿನಿಯೊಂದಿಗೆ ಮದುವೆ. 1990ರಲ್ಲಿ ನನ್ನ ಮಗನ ಜನನ. ಜೊತೆಗೆ ನಾನು ಪತ್ರಿಕಾರಂಗವನ್ನು ನನ್ನ ವೃತ್ತಿಯನ್ನಾಗಿ ಸ್ವೀಕರಿಸಿದೆ. ಬೆಳಗಾವಿಯಲ್ಲಿ ರಾಘವೇಂದ್ರ ಜೋಶಿಯವರ ನಾಡೋಜ, ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ, ಬೆಳಗಾವಿಯ ಕನ್ನಡಮ್ಮ, ಸಮತೋಲ ಸಂಜೆ ಪತ್ರಿಕೆ ಹೀಗೆ ಆರು ವರ್ಷ ತಳ ಮಟ್ಟದ ಪತ್ರಿಕೋದ್ಯಮದ ಜ್ಞಾನದೊಂದಿಗೆ 1997ರ ಫೆಬ್ರವರಿ 18ರಂದು ಬೆಳಗಾವಿಯ ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಸೇರಿದೆ. ಹಂತಹಂತವಾಗಿ ವೃತ್ತಿಯಲ್ಲಿ ಅನುಭವ ಪಡೆಯುತ್ತ ಪದೋನ್ನತಿಯನ್ನು ಪಡೆಯುತ್ತ ಬಂದಿದ್ದೇನೆ. ಪತ್ನಿ, ಮಗ, ಮಗಳು ಮತ್ತು ನಾನು. ಇದೇ ನನ್ನ ಖಾಸಗಿ ಪ್ರಪಂಚ. ಈ ಜಾಲತಾಣದಲ್ಲಿ ನಾನು ಬರೆದ ಎಲ್ಲ ರೀತಿಯ ಲೇಖನಗಳನ್ನು ಒಂದೊಂದಾಗಿ ಸೇರಿಸುತ್ತ ಹೋಗುತ್ತೇನೆ. ಓದಿ, ನಿಮಗೇನಾದರೂ ಅನ್ನಿಸಿದರೆ ಅದನ್ನು ದಾಖಲಿಸಿ.