*ಸಂಧಿವಿಗ್ರಹಿಗಳಿಗೆ ಇರಬೇಕಾದ ನೈಪುಣ್ಯ ಇದು

ಅತ್ಯಂತ ನಯವಾಗಿ ಕೆಲಸವನ್ನು ಸಾಧಿಸಿಕೊಳ್ಳುವವರನ್ನು ಕಂಡಾಗ ಅವರ ಚಾಣಾಕ್ಷತೆಗೆ ತಲೆದೂಗಿ, ಬೆಣ್ಣೆಯಲ್ಲಿ ಕೂದಲು ತೆಗೆಯುವ ಕೆಲಸ ಮಾಡಿದ್ದಾನೆ ಎಂದು ಹೊಗಳುವುದನ್ನು ಕೇಳಿದ್ದೇವೆ.
ಬೆಣ್ಣೆಯಲ್ಲಿ ಕೂದಲನ್ನು ಹಾಕಿ ಎಳೆದರೆ ಅದರ ಗುರುತೇ ಸಿಗುವುದಿಲ್ಲ. ಆದರೆ ಕೂದಲನ್ನು ತೆಗೆದಿದ್ದಂತೂ ನಿಜ. ತಮ್ಮದು ಯಾವುದಾದರೂ ಕೆಲಸವನ್ನು ಮಾಡಿಸಿಕೊಳ್ಳಬೇಕಿದ್ದರೆ ಮೇಲಧಿಕಾರಿಗಳ ಎದುರು ಇಂಥ ನಯಗಾರಿಕೆ ಬೇಕಾಗುತ್ತದೆ. ತಾವು ನಮಗಾಗಿ ಕೇಳುತ್ತಿದ್ದೇವೆ ಎಂದು ಅವರಿಗೆ ಅನಿಸಬಾರದು. ಆದರೆ ತಮ್ಮ ಕೆಲಸವಾಗಿರಬೇಕು.
ರಾಯಭಾರಿಗಳಿಗೆ ಇಂಥ ಕಲೆ ಸಿದ್ಧಿಸಿರಬೇಕು. ಇವರನ್ನೇ ಹಿಂದೆ ಸಂಧಿವಿಗ್ರಹಿಗಳು ಎಂದು ಕರೆಯುತ್ತಿದ್ದರು. ಶತ್ರುರಾಜರ ಬಳಿಗೆ ರಾಯಭಾರಕ್ಕೆ ದೂತರನ್ನು ಕಳುಹಿಸುವಾಗ ಮಾತನ್ನು ಅಳೆದು ತೂಗಿ ಬಳಸುವವರನ್ನೇ ಕಳುಹಿಸಬೇಕಾಗುತ್ತದೆ. ಇಲ್ಲದಿದ್ದರೆ ಕೆಲಸ ಕೆಟ್ಟುಹೋಗುತ್ತದೆ.