*ಮನಬಂದಂತೆ ನಡೆಸುವ ಆಡಳಿತ

ನಸ್ಸಿಗೆ ಬಂದುದನ್ನು ಮಾಡುವವರನ್ನು ಕಂಡಾಗ, ಅದೇನು ತುಘಲಕ್‌ ದರ್ಬಾರ್‌ ಆಗಿಹೋಯ್ತೆ?' ಎಂದು ಉದ್ಗಾರ ತೆಗೆಯುವವರನ್ನು ಕಾಣುತ್ತೇವೆ. ಹೀಗೆ ಮನಸ್ಸಿಗೆ ಬಂದುದನ್ನು ಮಾಡುವಾಗ ಅದರಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚಿಗೆ ಇರುತ್ತದೆ. ಯಾರೀತ ತುಘಲಕ್‌? ಕ್ರಿ.ಶ. 1325-1351ರ ವರೆಗೆ ದೆಹಲಿಯನ್ನು ಆಳಿದ ಸುಲ್ತಾನರಲ್ಲಿ ಒಬ್ಬ. ಇವನಲ್ಲಿ ಉದಾತ್ತವಾದ ಆಲೋಚನೆಗಳು ಇದ್ದವು. ಆದರೆ ಅವನ್ನು ಕಾರ್ಯರೂಪಕ್ಕೆ ತಂದಾಗ ಅವು ಯಶಸ್ವಿಯಾಗದೆ ಅವನಿಗೆ ಕೆಟ್ಟ ಹೆಸರನ್ನು ತಂದವು. ತನ್ನ ರಾಜಧಾನಿಯು ಕೇಂದ್ರ ಸ್ಥಳದಲ್ಲಿ ಇರಬೇಕು ಎಂದು ಆತ ಬಯಸಿದ. ಅದು ಸೂಕ್ತವಾದ ಯೋಚನೆಯೇ ಆಗಿತ್ತು. ಕಾರಣ ಆತ ಅದನ್ನು ದೆಹಲಿಯಿಂದ ದೇವಗಿರಿಗೆ (ದೌಲತಾಬಾದ್‌) ಬದಲಾಯಿಸಿದ. ಭೀಕರ ಪ್ಲೇಗ್‌ನಿಂದ ಆತನ ಅರ್ಧದಷ್ಟು ಸೇನೆ ನಾಶವಾಯಿತು. ಹೀಗಾಗಿ ಆತ ಮತ್ತೆ ತನ್ನ ರಾಜಧಾನಿಯನ್ನು ದೆಹಲಿಗೇ ವರ್ಗಾಯಿಸಿದ. ಚಿನ್ನ, ಬೆಳ್ಳಿಯ ನಾಣ್ಯಗಳ ಬದಲಿಗೆ ಚರ್ಮದ ನಾಣ್ಯಗಳನ್ನು ಆತ ಬಳಕೆಗೆ ತಂದ. ಅದೊಂದು ಅಪೂರ್ವವಾದ ಯೋಜನೆಯಾಗಿದ್ದರೂ ಯಶಸ್ವಿಯಾಗಲಿಲ್ಲ. ಏನೋ ಮಾಡುವುದು, ಅದು ಯಶಸ್ವಿಯಾಗದೆ ಇದ್ದಾಗ ಹಳೆಯದಕ್ಕೇ ಮರಳುವುದಕ್ಕೆ`ತುಘಲಕ್‌ ದರ್ಬಾರ್‌’ ಮಾತು ಚಲಾವಣೆಗೆ ಬಂದುಬಿಟ್ಟಿದೆ.