*ಒಬ್ಬರಿಗೊಬ್ಬರು ಪೈಪೋಟಿ ನೀಡುವ ದ್ವಂದ್ವ ಗಾಯನ

ದು ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದ ಪದ. ಇಬ್ಬರು ಗಾಯಕರು ಒಟ್ಟಿಗೆ ಹಾಡುವುದು ಅಥವಾ ಇಬ್ಬರು ಸಂಗೀತಗಾರರು ಜೊತೆಯಲ್ಲಿ ತಮ್ಮ ಸಂಗೀತ ವಾದನವನ್ನು ನುಡಿಸುವುದು ಜುಗಲ್‌ಬಂದಿ ಎನ್ನಿಸಿಕೊಳ್ಳುತ್ತದೆ.
ಈ ಜುಗಲ್‌ಬಂದಿಯಲ್ಲಿ ಪರಸ್ಪರ ಸ್ಪರ್ಧೆ ಇರುತ್ತದೆ. ಪೈಪೋಟಿ ಇರುತ್ತದೆ. ಹಾಡುಗಾರಿಕೆಯಲ್ಲಿ ಹಾಡುವವರು ಮುಖ್ಯವಾಗುತ್ತಾರೆಯೇ ಹೊರತು ಪಕ್ಕವಾದ್ಯದವರಲ್ಲ. ಸಂಗೀತಸಾಧನದ ಜುಗಲ್‌ಬಂದಿಯಲ್ಲಿ ಪರಸ್ಪರ ಒಂದೇ ಸಾಧನವನ್ನು ನುಡಿಸಬೇಕೆಂದೇನಿಲ್ಲ. ಸಿತಾರ್‌-ಸಂತೂರ್‌, ತಬಲಾ- ಕೊಳಲು ಹೀಗೆ ಜೋಡಿ ಬೇರೆಬೇರೆ ಆಗಬಹುದು.
ಇಂದು ಜಗಲ್‌ಬಂದಿ ಎನ್ನುವ ಪದ ಸಂಗೀತ ಕ್ಷೇತ್ರದ ಈಚೆಗೂ ಉಪಮೆಯ ರೂಪದಲ್ಲಿ ಬಳಕೆಗೆ ಬಂದಿದೆ. ಕ್ರಿಕೆಟ್‌ನಲ್ಲಿ ಇಬ್ಬರು ಆಟಗಾರರು ಉತ್ತಮ ಜೊತೆಯಾಟ ಪ್ರದರ್ಶಿಸಿದಾಗ ಅವರಿಬ್ಬರ ಜುಗಲ್‌ಬಂದಿ ಅಪೂರ್ವವಾಗಿತ್ತು ಎಂದು ಹೇಳುವುದನ್ನು ಕೇಳಿದ್ದೇವೆ. ಒಂದೇ ಕ್ಷೇತ್ರದಲ್ಲಿ ಜೊತೆಯಾಗಿ ಸಾಧನೆ ಮಾಡಿದವರು, ವಿಶೇಷ ಸಾಧನೆ ಮಾಡಿದ ಪತಿ-ಪತ್ನಿ ಹೀಗೆ ಇವರೆಲ್ಲರ ಜುಗಲ್‌ಬಂದಿ ಆಗಾಗ ಕಿವಿಯ ಮೇಲೆ ಬೀಳುತ್ತಿರುತ್ತದೆ.
ಇದು ಬರೀ ಜೊತೆಯಲ್ಲ, ಜೊತೆಗೆ ಪೈಪೋಟಿಯೂ ಇರುತ್ತದೆ.