*ರಾಜಕಾರಣದ ಕೂಟ ನೀತಿ ಇದು

ರಾಜಕಾರಣದ ತಂತ್ರ ಪ್ರತಿತಂತ್ರಗಳಲ್ಲಿ ಚಾಣಕ್ಯತಂತ್ರ ಪ್ರಸಿದ್ಧವಾದದ್ದು. ಬಹಳ ಚಾಣಾಕ್ಷ ರಾಜಕೀಯ ನಡೆಯನ್ನು ಚಾಣಕ್ಯ ತಂತ್ರ ಎಂದು ಕರೆಯುತ್ತಾರೆ. ಚತುರ ರಾಜಕಾರಣಿಯನ್ನು ಚಾಣಕ್ಯ ಎಂದು ಕರೆಯುವುದನ್ನು ಕೇಳಿದ್ದೇವೆ. ಒಬ್ಬನ ರಾಜಕೀಯ ಚಾತುರ್ಯವನ್ನು ಹೊಗಳಬೇಕೆಂದರೆ, ಅವನು ಚಾಣಕ್ಯ ಕಣ್ರಿ' ಎಂದು ಹೇಳುವುದನ್ನು ಕೇಳಿದ್ದೇವೆ. ಯಾರು ಈ ಚಾಣಕ್ಯ? ಚಂದ್ರಗುಪ್ತ ಮೌರ್ಯನಿಗೆ ನಂದರ ವಿರುದ್ಧ ಗೆಲವು ತಂದುಕೊಟ್ಟುಚಕ್ರವರ್ತಿಯನ್ನಾಗಿ ಮಾಡಿದವನು. ಕೌಟಿಲ್ಯ ಎಂಬುದು ಇವನ ಮೂಲ ಹೆಸರು. ಇವನ `ಅರ್ಥಶಾಸ್ತ್ರ’ ಕೃತಿಯು ರಾಜಕೀಯ ಪ್ರವೇಶಕ್ಕೊಂದು ಮಾರ್ಗದರ್ಶಿ. ಹೇಗೆ ರಾಜಕೀಯವನ್ನು ಮಾಡಬೇಕು, ಶತ್ರುಗಳನ್ನು ಹೇಗೆ ಬೇರುಮಟ್ಟದಿಂದ ನಾಶಮಾಡಬೇಕು ಎಂಬುದನ್ನು ಅರಿಯಬೇಕೆಂದರೆ ಕೌಟಿಲ್ಯನನ್ನು ಓದಬೇಕು.
ಕೌಟಿಲ್ಯನಿಂದಾಗಿಯೇ ಕುಟಿಲ ನೀತಿ ಎಂಬುದು ಚಲಾವಣೆಗೆ ಬಂದಿದೆ.
ರಾಜಕಾರಣದಲ್ಲಿ ಕೃಷ್ಣ ಕಾರಸ್ಥಾನ, ಚಾಣಕ್ಯ ನೀತಿ, ಶಕುನಿ ತಂತ್ರ ಪ್ರಸಿದ್ಧವಾದದ್ದು.