*ತಪ್ಪಿಸಿಕೊಳ್ಳಲಾಗದ ಸಮಸ್ಯೆ

ಷ್ಟದ ಮೇಲೆ ಕಷ್ಟ. ಅದರಿಂದ ಹೊರಬರಲು ಆಗದೆ ಸುಸ್ತಾದ ವ್ಯಕ್ತಿ `ಚಕ್ರವ್ಯೂಹ’ದಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದೇನೆ ಎಂದು ಹೇಳುವುದನ್ನು ಕೇಳಿಸಿಕೊಂಡಿದ್ದೇವೆ. ಅದೇನು ಚಕ್ರವ್ಯೂಹ?
ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಸೇನಾಪತಿ ದ್ರೋಣಾಚಾರ್ಯರು ಪಾಂಡವರನ್ನು ಸೋಲಿಸಲು ಚಕ್ರವ್ಯೂಹವನ್ನು ರಚಿಸುತ್ತಾರೆ. ಚಕ್ರವ್ಯೂಹವನ್ನು ಭೇದಿಸುವುದು ಅರ್ಜುನನಿಗೆ ಮಾತ್ರ ಸಾಧ್ಯವಿತ್ತು. ಆದರೆ ಅರ್ಜುನನ್ನು ಉಪಾಯದಿಂದ ದೂರ ಕರೆದೊಯ್ದರು.
ಆಗ ಅರ್ಜುನನ ಮಗ ಅಭಿಮನ್ಯು ಮುಂದೆ ಬರುತ್ತಾನೆ. ತನಗೆ ಚಕ್ರವ್ಯೂಹವನ್ನು ಪ್ರವೇಶಿಸುವುದು ಗೊತ್ತು. ಆದರೆ ಹೊರಗೆ ಬರುವುದು ಗೊತ್ತಿಲ್ಲವೆಂದು ಹೇಳುತ್ತಾನೆ. ಅನಿವಾರ್ಯವಾಗಿ ಅಭಿಮನ್ಯುವೇ ಪಾಂಡವ ಸೇನೆಯ ನೇತೃತ್ವ ವಹಿಸಬೇಕಾಗುತ್ತದೆ. ಕೌರವ ಪಡೆಯ ಮೋಸದಿಂದ ಅಭಿಮನ್ಯು ತನ್ನ ಪ್ರಾಣವನ್ನು ತ್ಯಜಿಸಬೇಕಾಗುತ್ತದೆ.
ಹೀಗೆ ತಪ್ಪಿಸಿಕೊಳ್ಳಲಾಗದ ತೊಂದರೆಯಲ್ಲಿ ಸಿಲುಕಿದವರು ಅಭಿಮನ್ಯುವಿನ ಸ್ಥಿತಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಾರೆ.