*ಈ ಮದುವೆಗೆ ಎಂದೂ ಮುಹೂರ್ತ ಕೂಡಿಬರಲೇ ಇಲ್ಲ

ಣಪತಿ ಬ್ರಹ್ಮಚಾರಿಯೋ ಅಥವಾ ಗೃಹಸ್ಥನೋ ಎಂಬ ಬಗ್ಗೆ ಇನ್ನೂ ಒಮ್ಮತ ಮೂಡಿ ಬಂದಿಲ್ಲ. ಕೆಲವರು ಆತ ಬ್ರಹ್ಮಚಾರಿ ಎಂದರೆ ಇನ್ನು ಕೆಲವರು ಆತನಿಗೆ ಸಿದ್ಧಿ-ಬುದ್ಧಿ ಎಂಬ ಇಬ್ಬರು ಹೆಂಡತಿಯರು ಎಂದು ಹೇಳುತ್ತಾರೆ.
ಗಣಪತಿಯ ಜನ್ಮಕ್ಕೆ ಕಾರಣಳಾದ ಪಾರ್ವತಿಗೆ ಆತನ ಮೇಲೆ ಷಣ್ಮುಖನಿಗಂತ ಒಂದು ಗುಂಜಿ ಪ್ರೀತಿ ಹೆಚ್ಚಿಗೆ ಎಂದೇ ಹೇಳಬಹುದು. ಪ್ರೀತಿಯ ಮಗನಿಗೆ ಮದುವೆ ಮಾಡುವ ಮನಸ್ಸು ಆಕೆಗೆ. ಗಣಪತಿ ನಿನ್ನ ಮದುವೆ ಯಾವಾಗ ಮಾಡೋಣ ಎಂದು ಅಮ್ಮ ಕೇಳಿದರೆ, ಗಣಪತಿ ನಾಳೆ' ಎಂದು ಹೇಳುತ್ತಾನೆ. ನಾಳೆ ಎನ್ನುವುದು ರಾತ್ರಿ ಕಳೆದಾಗಇಂದು’ ಆಗಿರುತ್ತದೆ. ಇಂದು ಕೇಳಿದಾಗಲೂ ಗಣಪತಿಯದು ನಾಳೆ ಎನ್ನುವುದೇ ಉತ್ತರ.
ಎಷ್ಟೋ ಸಲ ನಾವು ಒಂದು ಕಲಸವನ್ನು ಮಾಡಬೇಕು ಎಂದುಕೊಂಡಿರುತ್ತೇವೆ. ಕೊನೆಗೆ ನಾಳೆ ಮಾಡಿದರಾಯಿತು ಎಂದು ಸುಮ್ಮನಾಗುತ್ತೇವೆ. ನಾಳೆಯೂ ಮತ್ತೆ ಅದೇ ಮನೋಭಾವ. ಹೀಗೆ ಮುಂದೂಡುವುದು ಇನ್ನೊಬ್ಬರಿಗೆ ಕಿರಿಕಿರಿಯಾಗಾದ ಅವರ ಬಾಯಿಂದ, ಒಳ್ಳೆ ಗಣಪತಿ ಮದುವೆಯಂಗೆ ಆಯ್ತಲ್ಲ' ಎಂಬ ಉದ್ಗಾರ ಹೊರಬೀಳುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಯಾವುದಾದರೂ ಕೆಲಸಕ್ಕೆ ಹೋದರೆ,ನಾಳೆ ಬಾ’ ಎಂದು ಹೇಳುವುದು ಸಾಮಾನ್ಯವಾಗಿಬಿಟ್ಟಿದೆ. ಆಗೆಲ್ಲ, `ಗಣಪತಿ ಮದುವೆ ಹಾಗೆ ಆಯ್ತಲ್ಲ ಇದು’ ಎಂಬ ಮಾತು ಸಹಜವಾಗಿ ಹೊರಡುತ್ತದೆ.