*ಕಷ್ಟಪಡದೆ ಸುಖ ಇಲ್ಲ

ಸುಖ ಪಡಬೇಕು ಎಂದರೆ ಕಷ್ಟ ಪಡಲೇಬೇಕು. `ಕೈ ಕೆಸರಾದರೆ ಬಾಯಿ ಮೊಸರು' ಎಂದು ಹೇಳುತ್ತಾರಲ್ಲ. ಹಾಗೆ ಇದು. ಕಷ್ಟಪಡದೆ ಸುಖಪಡುವ ಆಸೆಯಲ್ಲಿದ್ದವರನ್ನು ಕಂಡಾಗಕೊಕ್ಕೆಯಲ್ಲಿ ಜೇನು ಕೊಯ್ಯುವವರು ಇವರು’ ಎಂದು ಹೇಳುವುದನ್ನು ನೀವು ಕೇಳಿರಬಹುದು.
ಇಲ್ಲಿ ಕೊಯ್ಯುವುದು ಎದರೆ ಕೀಳುವುದು. ಕೊಕ್ಕೆಯಿಂದ ಜೇನನ್ನು ಕಿತ್ತರೆ ಅದು ನಮ್ಮ ಕೈಗೆ ಸಿಗದೆ ನೆಲಕ್ಕೆ ಬಿದ್ದು ತಿನ್ನಲು ಆಗದ ಸ್ಥಿತಿಯನ್ನು ತಲುಪುತ್ತದೆ. ಆದರೆ ಜೇನಿನ ಸ್ವಾದ ನಮಗೆ ಸಿಗಬೇಕೆಂದರೆ ಜೇನಿನ ಹುಟ್ಟಿಗೆ ನಾವು ಕೈ ಹಚ್ಚಬೇಕು. ಆಗ ಜೇನು ನೊಣಗಳು ಕಡಿಯತ್ತವೆ. ನೋವಾಗುತ್ತದೆ. ಮೈಗೆ ಬಾವು ಬರುತ್ತದೆ. ಇಷ್ಟೆಲ್ಲ ಕಷ್ಟಪಟ್ಟು ತೆಗೆದ ಜೇನು ತಿನ್ನುವುದಕ್ಕೆ ರುಚಿ ಮತ್ತು ಶುಚಿಯಾಗಿರುತ್ತದೆ.
ಒಳ್ಳೆಯ ಪ್ರತಿಫಲ ಬೇಕೆಂದರೆ ಚೆನ್ನಾಗಿ ಶ್ರಮ ವಹಿಸಬೇಕು. ಕಷ್ಟಗಳ ಪರಿವೇ ಇಲ್ಲದೆ ಕೆಲಸ ಮಾಡುವವರಿಗೆ ಯಶಸ್ಸು ಎಂಬುದು ಇದರ ತಾತ್ಪರ್ಯ.