*ಪ್ರಪಂಚದ ವಿಸ್ತಾರ ಅರಿಯದವರು
ಅವನೊಳ್ಳೆ ಕೂಪಮಂಡೂಕ ಇದ್ದಂಗೆ ಅವ್ನೆ ನೋಡು' ಎಂದೋ,
ಅವನೊಳ್ಳೆ ಬಾವಿ ಕಪ್ಪೆ ನೋಡು’ ಎಂದೋ ಇನ್ನೊಬ್ಬರ ಮೇಲೆ ಟಿಪ್ಪಣಿಯನ್ನು ದಾಖಲಿಸುವುದು ಸಾಮಾನ್ಯ. ಏನಿದು ಕೂಪ ಮಂಡೂಕ? ಕೂಪವೆಂದರೆ ಬಾವಿ. ಬಾವಿಯಲ್ಲಿರುವ ಕಪ್ಪೆಗೆ ಕೂಪಮಂಡೂಕ ಎಂದು ಹೇಳುತ್ತಾರೆ.
ಬಾವಿಯಲ್ಲಿರುವ ಕಪ್ಪೆಗೆ ಹೊರಗಿನ ಪ್ರಪಂಚದ ವಿಸ್ತಾರವೇ ಗೊತ್ತಿರುವುದಿಲ್ಲ. ಆ ಬಾವಿಯೇ ಅದರ ಪ್ರಪಂಚವಾಗಿರುತ್ತದೆ. ಬಾವಿಗಿಂತ ದೊಡ್ಡ ಇನ್ನೊಂದು ಪ್ರಪಂಚ ಇದೆ ಎಂಬುದನ್ನು ಅದು ಒಪ್ಪುವುದಕ್ಕೆ ಸಿದ್ಧವೇ ಇರುವುದಿಲ್ಲ.
ಅಲ್ಪ ಜ್ಞಾನಿಗಳಾದವರು ತಮ್ಮ ಜ್ಞಾನದ ಮಿತಿಗೆ ದಕ್ಕಿದ್ದೇ ಸತ್ಯವೆಂದುಕೊಳ್ಳುತ್ತಾರೆ. ಅದರ ಆಚೆಯ ಸಾಧ್ಯತೆಯ ಕುರಿತು ಚಿಂತಿಸುವುದಕ್ಕೂ ಅವರು ಹೋಗುವುದಿಲ್ಲ. ಅಂಥವರನ್ನು ಬಾವಿಕಪ್ಪೆ ಎಂದೋ ಕೂಪಮಂಡೂಕವೆಂದೋ ಟೀಕಿಸುತ್ತಾರೆ.
ಇನ್ನು ಬಾವಿಕಪ್ಪೆಯದೇ ಪುರಾಣವೊಂದಿದೆ. ಒಂದು ಬಾವಿಗೆ ಸಮುದ್ರದಿಂದ ಒಂದು ಕಪ್ಪೆ ಬರುತ್ತದೆ. ಬಾವಿ ಕಪ್ಪೆ ಸಮುದ್ರದ ಕಪ್ಪೆಗೆ, ನೀನು ಎಲ್ಲಿಂದ ಬಂದೆ?' ಎಂದು ಕೇಳುತ್ತದೆ.
ನಾನು ಸಮುದ್ರದಿಂದ ಬಂದೆ’ ಎಂದು ಅದು ಹೇಳುತ್ತದೆ. ಸಮುದ್ರವೆಂದರೆ ಎಷ್ಟು ದೊಡ್ಡದು?' ತುಂಬಾ ದೊಡ್ಡದು ಎಂದು ಸಮುದ್ರ ಕಪ್ಪೆ ಹೇಳುತ್ತದೆ. ಬಾವಿ ಕಪ್ಪೆ ತನ್ನ ಮೈಯನ್ನು ಹಿಗ್ಗಿಸುತ್ತ,
ಇಷ್ಟು ದೊಡ್ಡದೆ?’ ಎಂದು ಕೇಳುತ್ತದೆ. ಇನ್ನೂ ದೊಡ್ಡದು ಎಂದು ಸಮುದ್ರ ಕಪ್ಪೆ ಹೇಳುತ್ತದೆ. ಬಾವಿ ಕಪ್ಪೆ ಮೈ ಹಿಗ್ಗಿಸುತ್ತ ಹೋಗುತ್ತದೆ. ಕೊನೆಗೆ ಹೊಟ್ಟೆ ಒಡೆದು ಸಾಯುತ್ತದೆ.
Uttama barahagalu.
Thank you sir
ಧನ್ಯವಾದಗಳು ಓದಿ ಪ್ರತಿಕ್ರಿಯಿಸಿದ್ದಕ್ಕೆ
ಧನ್ಯವಾದಗಳು