*ಬದ್ಧ ವೈರತ್ವವನ್ನು ಇದು ಹೇಳುತ್ತದೆ

ಬ್ಬರು ಶತ್ರುಗಳು ಬಹಳ ವೈರಿಗಳು ಎಂದು ಒತ್ತಿ ಹೇಳುವುದಕ್ಕೆ ಅವರಿಬ್ಬರೂ ಹಾವು ಮುಂಗಸಿ ಎಂದು ಹೇಳುವುದನ್ನು ಕೇಳಿದ್ದೇವೆ. ರಾಜಕೀಯದಲ್ಲಿ ಅವರಿಬ್ಬರೂ ಹಾವು ಮುಂಗಸಿ ಎಂದು ಹೇಳುವುದನ್ನು ಕೇಳಿದ್ದೇವೆ. ಇಬ್ಬರ ಹೋರಾಟವನ್ನು ಹೇಳುವಾಗಲೂ ಅವರಿಬ್ರೂ ಹಾವು ಮುಂಗಸಿಯ ಹಾಗೆ ಹೋರಾಡಿದರು ಎಂದು ಹೇಳುತ್ತೇವೆ. ಅಂದರೆ ಜೀವದ ಹಂಗು ತೊರೆದು ಹೋರಾಡಿದರು. ಇಬ್ಬರಲ್ಲಿ ಯಾರಾದರೂ ಒಬ್ಬರು ಸಾಯಬಹುದಿತ್ತು ಎಂಬ ತಾತ್ಪರ್ಯ.
ಹಾವು ಮುಂಗಸಿಯ ನಡುವೆ ಅದೇನು ಶತ್ರುತ್ವ? ಇಲ್ಲಿ ಶತ್ರುತ್ವದ ಪ್ರಶ್ನೆ ಇಲ್ಲ. ಮುಂಗಲಿಗಳ ಆಹಾರದ ಪಟ್ಟಿಯ ಏಡಿ, ಹಲ್ಲಿ ಇತ್ಯಾದಿಗಳ ಜೊತೆ ಹಾವೂ ಸೇರುತ್ತದೆ. ಆಹಾರಕ್ಕಾಗಿ ಇಪ್ಪತ್ತಡಿ ಉದ್ದ ಕಾಳಿಂಗ ಸರ್ಪವನ್ನೇ ಮುಂಗಲಿ ಎದುರಿಸುವುದು ಅದರ ಧೈರ್ಯಕ್ಕೆ ಸಾಕ್ಷಿ. ಮುಂಗಲಿ ಒಂದಡಿ ಉದ್ದದ ಚಿಕ್ಕ ಕಾಲುಗಳ ಪ್ರಾಣಿ. ಆದರೆ ಇದರ ವೇಗ ತೀಕ್ಷ್ಣವಾದದ್ದು. ಹಾವುಗಳಲ್ಲಿ ಕಾಳಿಂಗ ಉಳಿದವುಗಳಿಗೆ ಹೋಲಿಸಿದರೆ ಅಷ್ಟೊಂದು ಚುರುಕಲ್ಲ. ಹೀಗಾಗಿ ಕಾಳಿಂಗ ಸರ್ಪಗಳ ಮೇಲೆ ಮುಂಗಲಿಗಳು ಎರಗುವುದು ಅಧಿಕ.
ಮುಂಗಲಿಗಳಲ್ಲಿ ವಿಷ ನಿರೋಧಕ ಗುಣವೇನಿಲ್ಲ. ಹೋರಾಟದಲ್ಲಿ ವಿಷದ ಹಾವಿನಿಂದ ಕಡಿಸಿಕೊಂಡರೆ ಮುಂಗಲಿಯೂ ಸಾಯುತ್ತದೆ.
ಕನ್ನಡದ ಮುಂಗಲಿ ಮರಾಠಿ, ಹಿಂದಿಯಲ್ಲಿ ಮಂಗೂಸ್‌ ಆಗಿದ್ದು ಅದನ್ನೇ ಇಂಗ್ಲೀಷ್‌ನಲ್ಲಿ ಮಾಂಗೂಸ್‌ ಎಂದು ಸ್ವೀಕರಿಸಲಾಗಿದೆ.