ಈಗ ಕವನ ಬರೆಯುವುದು 
ಸುಲಭವಲ್ಲ ಗೆಳೆಯ 
ಏಕೆಂಬೆಯಾ
ಏಕೆಂದರೆ ಕವನ
ಬರೆಯುವುದೆಂದರೆ ಸತ್ಯವನ್ನು
ಹೇಳಬೇಕು, ಕವನ
ಬರೆಯುವುದೆಂದರೆ ಮಾಡಿದ್ದನ್ನೇ
ಮಾಡಿದ್ದೇನೆ ಎನ್ನಬೇಕು
ಕವನ ಬರೆಯುವುದೆಂದರೆ
ಜಗ ಮೆಚ್ಚಿ ಅಹುದಹುದು
ಎನಬೇಕು.
ಆದರೆ
ಸತ್ಯ ಹೇಳುವುದು
ಅಷ್ಟು ಸುಲಭವಲ್ಲ
ಮಾಡಿದ್ದನ್ನೆಲ್ಲ ಹೇಳಿ 
ಬೆತ್ತಲಾಗುವ ಎದೆ
ಗಾರಿಕೆ ಇಲ್ಲ
ಇನ್ನು ಜಗ ಎಲ್ಲಿ
ಮೆಚ್ಚಬೇಕು ಹೇಳು?
ಅದಕ್ಕೇ ಕವನ ಬರೆಯುವುದು
ಈಗ ಸುಲಭವಲ್ಲ.