*ಎರಡೂ ಕೈಯಿಂದ ಬಾಣ ಬಿಡುವವನು
ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬರೆಯಬಲ್ಲವನನ್ನು, ಎರಡೆರಡು ವಿಷಯಗಳಲ್ಲಿ ಸಮಾನ ಪರಿಣತಿಯನ್ನು ಹೊಂದಿದವನನ್ನು ಕಂಡಾಗ ಸವ್ಯಸಾಚಿ ಎಂದು ಅವನನ್ನು ಕರೆಯುವುದಿದೆ.
ಮಹಾಭಾರತದಲ್ಲಿ ಅರ್ಜುನನ್ನು ಸವ್ಯಸಾಚಿ ಎಂದು ಕರೆಯಲಾಗಿದೆ. ಅರ್ಜುನ ಎರಡೂ ಕೈಯಿಂದ ಗಾಂಡೀವ ಧನುಸ್ಸಿನಲ್ಲಿ ಬಾಣವನ್ನು ಹೂಡಿ ಪ್ರಯೋಗಿಸಬಲ್ಲವನಾಗಿದ್ದ. ಅದೊಂದು ಅಪರೂಪದ ಕೌಶಲ್ಯ.
ಸವ್ಯ ಎಂದರೆ ಎಡ, ಬಲ, ತಿರುಗು ಮುರುಗು ಎಂಬ ಅರ್ಥಗಳಿವೆ. ಸವ್ಯ ಅಪಸವ್ಯ ಪದಗಳನ್ನು ಅಪರಕರ್ಮದಲ್ಲಿ ಪ್ರಯೋಗಿಸುತ್ತಾರೆ. ಸವ್ಯಕ್ಕೇ ಎಡ ಬಲ ಎಂಬ ಅರ್ಥಗಳಿದ್ದರೂ ಅಲ್ಲಿ ಸವ್ಯವನ್ನು ಕೇವಲ ಎಡ ಎಂಬ ಅರ್ಥಕ್ಕೆ ಸೀಮಿತಗೊಳಿಸಿ ಅಪಸವ್ಯವನ್ನು ಬಲ ಎಂಬ ಅರ್ಥದಲ್ಲಿ ಬಳಸುತ್ತಾರೆ. ಜನಿವಾರವನ್ನು ಎಡಕ್ಕೂ ಬಲಕ್ಕೂ ಬದಲಾಯಿಸುವಾಗ ಸವ್ಯ ಅಪಸವ್ಯ ಪದಗಳ ಬಳಕೆಯಾಗುತ್ತದೆ.
ಆದರೆ ಒಂದಕ್ಕಿಂತ ಹೆಚ್ಚು ವಿಷಯಗಳಲ್ಲಿ ನಿಸ್ಸೀಮನಾದವನಿಗೆ ಸವ್ಯಸಾಚಿ ಎಂದು ಕರೆಯುವುದು ರೂಢಿಯಲ್ಲಿ ಬಂದಿದೆ.
ಉತ್ತಮ ಪ್ರಯತ್ನ. ಮುಂದುವರೆಯಲಿ.
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ
ಧನ್ಯವಾದಗಳು ಓದಿ ಪ್ರತಿಕ್ರಿಯಿಸಿದ್ದಕ್ಕೆ