*ಬಲಿ ಕೊಡುತ್ತೇವೆ ಎಂಬ ಎಚ್ಚರಿಕೆ ಇದು

ತ್ತರ ಕರ್ನಾಟಕದ ಜನರಿಗೆ ಮುಂದೈತೆ ಮಾರಿ ಹಬ್ಬ ಎಬ ಮಾತು ತಕ್ಷಣ ಅರ್ಥವಾಗಿಬಿಡುತ್ತದೆ. ಈಗೇನೋ ತಪ್ಪಿಸಿಕೊಂಡುಬಿಟ್ಟೆ. ಮುಂದೆ ನಿನ್ನನ್ನು ನೋಡಿಕೊಳ್ಳುತ್ತೇವೆ. ನಿನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತೇವೆ. ನೀನು ಸಾಯುವಂತೆ ಹೊಡೆಯುತ್ತೇವೆ ಎಂಬೆಲ್ಲ ಅರ್ಥಗಳು ಇದರಲ್ಲಿವೆ.
ಮಾರಿ ಹಬ್ಬದಲ್ಲಿ ಸಾಮಾನ್ಯವಾಗಿ ಪ್ರಾಣಿಗಳನ್ನು ಬಲಿ ಕೊಡುತ್ತಾರೆ. ಬಲಿ ಇಲ್ಲದ ಮಾರಿ ಹಬ್ಬ ಇಲ್ಲವೇ ಇಲ್ಲ. ಮಾರಿ ಹಬ್ಬದಲ್ಲಿ ಬಲಿ ಕೊಡುವ ಪ್ರಾಣಿಯನ್ನು ಹೇಗೆ ಮಾಲೆಗೀಲೆ ಹಾಕಿ ಶೃಂಗಾರಗೊಳಿಸುತ್ತಾರೆ ಎಂಬುದಕ್ಕೆ ದೇವನೂರ ಮಹಾದೇವ ಅವರು ಅಮಾಸ ಕತೆಯಲ್ಲಿ ಅಕ್ಷರರೂಪ ಕೊಟ್ಟಿದ್ದಾರೆ.
ನಿನ್ನ ಸಾವಿನ ಹಬ್ಬ ನಾವು ಆಚರಿಸುತ್ತೇವೆ ಎಂಬ ದ್ವೇಷದ, ಎಚ್ಚರಿಕೆಯ ಮಾತು ಇದು. ಬಲಿಯಾಗುವ ಪಶುವಿಗೆ ಆಯ್ಕೆ ಎಂಬುದು ಇಲ್ಲ. ಖಡ್ಗಕ್ಕೆ ಕುತ್ತಿಗೆಯನ್ನು ನೀಡುವುದು ಮಾತ್ರ ಅದರ ಕೆಲಸ.