*ಯಥಾವತ್ತಾಗಿ ನಕಲು ಮಾಡು

ನಿದೆ ಇವಂದು? ಎಲ್ಲ ಅವನದ್ದೇ ಭಟ್ಟಿ ಇಳಿಸಿದ್ದಾನೆ ಎಂದು ಹೇಳುವುದನ್ನು ಕೇಳಿದ್ದೇವೆ. ಅಂದರೆ ಎಲ್ಲವನ್ನೂ ಯಥಾವತ್ತಾಗಿ ಸ್ವೀಕರಿಸಿದ್ದಾನೆ ಎಂಬ ಅರ್ಥ ಇಲ್ಲಿದೆ. ಬೇರೆಯವರದ್ದನ್ನು ಕದ್ದು ತಮ್ಮದೆಂದು ಹೇಳಿಕೊಳ್ಳುವಲ್ಲೂ ಈ ಭಟ್ಟಿ ಇಳಿಸುವಿಕೆ ಬಳಕೆಯಾಗುತ್ತದೆ. ಇದು ಚೌರ್ಯ.
ಭಟ್ಟಿ ಇಳಿಸುವುದರ ಮೂಲ ಅರ್ಥ ಶುದ್ಧೀಕರಿಸು ಎನ್ನುವುದು. ಶುದ್ಧ ನೀರನ್ನು ತಯಾರಿಸುವ ವಿಧಾನಗಳಲ್ಲಿ ಭಟ್ಟಿ ಇಳಿಸುವುದೂ ಒಂದು. ನೀರನ್ನು ಕಾಯಿಸಿ ಅದರ ಹಬೆಯನ್ನು ಬೇರೊಂದು ಪಾತ್ರೆಯಲ್ಲಿ ಸಂಗ್ರಹಿಸಿ ಅದನ್ನು ತಂಪುಗೊಳಿಸಿದಾಗ ಶುದ್ಧ ನೀರು ದೊರೆಯುತ್ತದೆ. ಇದು ವಿಜ್ಞಾನ.
ಭಟ್ಟಿ ಇಳಿಸುವಿಕೆ ಎಂದಾಗ ನೆನಪಾಗುವುದು ಕಳ್ಳಭಟ್ಟಿ ತಯಾರಿಕೆ. ಇಲ್ಲಿಯೂ ಹಣ್ಣಿನ ಕೊಳೆಯನ್ನು ಭಟ್ಟಿ ಇಳಿಸಿಯೇ ಶುದ್ಧ ಸಾರಾಯಿ ತಯಾರಿಸುತ್ತಾರೆ. ಇಲ್ಲಿಯೂ ವಿಜ್ಞಾನವೇ ಇದೆ. ಆದರೆ ರೂಢಿಯಲ್ಲಿರುವ ಭಟ್ಟಿ ಇಳಿಸುವುದು ಎಂದರೆ ಚೌರ್ಯ.