*ಓದಲಾಗದಂಥ ಅಕ್ಷರಗಳು

ದೇನು ಬ್ರಹ್ಮಲಿಪಿನೋ ಏನೋ? ಒಂದಾದರೂ ಓದಲಿಕ್ಕೆ ಆಗುತ್ತದೆಯೆ? ಎಂದು ತಾತ್ಸಾರದಿಂದ ಹೇಳುವುದನ್ನು ಕೇಳಿದ್ದೇವೆ. ತೀರಾ ಕೆಟ್ಟದ್ದಾಗಿ ಓದಲಿಕ್ಕೂ ಆಗದ ಹಾಗೆ ಬರೆದಿರುವುದನ್ನು ಕಂಡಾಗ ಹೀಗೆ ಹೇಳುವುದು ಸಾಮಾನ್ಯವಾಗಿದೆ.
ಎಲ್ಲರ ಹಣೆಯಲ್ಲೂ ಬ್ರಹ್ಮನೇ ಭವಿಷ್ಯವನ್ನು ಬರೆಯುವವನಂತೆ. ಅದೇ ಬ್ರಹ್ಮ ಬರೆಹ. ಅದು ಯಾರಿಗೂ ಗೊತ್ತಿರುವುದಿಲ್ಲ. ಅದನ್ನು ಓದಿದವರು ಯಾರೂ ಇಲ್ಲ. ಯಾರೂ ಓದದ ಲಿಪಿಯೇ ಬ್ರಹ್ಮಲಿಪಿಯಾದ ಕಾರಣ ಕೆಟ್ಟದ್ದಾಗಿ ಬರೆದದ್ದೂ ಬ್ರಹ್ಮಲಿಪಿ ಇರಬಹುದೇನೋ?
ಇನ್ನೊಂದಿದೆ. ನಮ್ಮೆಲ್ಲ ಭಾಷೆಯ ಲಿಪಿಗಳು ವಿಕಾಸಗೊಳ್ಳುತ್ತ ಬಂದದ್ದು ಬ್ರಾಹ್ಮಿ ಲಿಪಿಯಿಂದ ಎಂದು ಹೇಳುತ್ತಾರೆ. ಮೂಲದ ಬ್ರಾಹ್ಮಿ ಲಿಪಿಯೇ ಕನ್ನಡವೂ ಸೇರಿದಂತೆ ಎಲ್ಲ ಭಾಷೆಗಳ ತಾಯಿ ಲಿಪಿ ಎಂಬುದು ಲಿಪಿ ತಜ್ಞರ ಅಭಿಪ್ರಾಯ.
ಈ ಬ್ರಾಹ್ಮಿ ಲಿಪಿಯೇ ಬ್ರಹ್ಮಲಿಪಿ ಆಗಿರುವ ಸಾಧ್ಯತೆಯೇ ಅಧಿಕ.