*ಜಗವೆಲ್ಲ ನಗುತ್ತಿರಲಿ, ಜಗದಳಲು ನನಗಿರಲಿ ಎನ್ನುವವರು

ವನೊಬ್ಬ ನಕಲಿ ಶ್ಯಾಮ ಎಂದು ಟೀಕಿಸುವುದನ್ನು ಕೇಳಿದ್ದೇವೆ. ನೀಲಮೇಘ ಶ್ಯಾಮ ಗೊತ್ತು. ಏನಿದು ನಕಲಿ ಶ್ಯಾಮ? ಸರ್ಕಸ್‌ಗಳಲ್ಲಿ ಇರುವ ಜೋಕರ್‌ಗಳನ್ನು ನಕಲಿ ಶ್ಯಾಮ ಎಂದು ಕರೆಯುತ್ತಾರೆ.
ಸರ್ಕಸ್‌ಗಳಲ್ಲಿ ನಗಿಸುವುದೇ ಇವರ ಕೆಲಸ. ಫಜೀತಿಯ ಪ್ರಸಂಗಗಳಲ್ಲಿ ತಮ್ಮನ್ನು ತಾವೇ ಬೀಳಿಸಿಕೊಂಡು ಪ್ರೇಕ್ಷಕರಲ್ಲಿ ನಗುವನ್ನು ಉಕ್ಕಿಸುವುದು ಅವರ ಕಾಯಕ.
ಶ್ಯಾಮ ಎಂದರೆ ಕೃಷ್ಣ. ತುಂಟಾಟಗಳನ್ನು ಮಾಡುವುದರಲ್ಲಿ ಕೃಷ್ಣ ಹೆಸರುವಾಸಿ. ಈ ಜೋಕರ್‌ಗಳೂ ಆರಂಭದಲ್ಲಿ ಕೃಷ್ಣನ ವೇಷವನ್ನು ಧರಿಸಿಕೊಂಡು ಬರುತ್ತಿದ್ದರೋ ಏನೋ? ಯಕ್ಷಗಾನದಲ್ಲಿ ಬಾಲಗೋಪಾಲರು ಬರುತ್ತಾರಲ್ಲವೆ, ಹಾಗೆ.
ರಾಜ್‌ಕಪೂರ್‌ ಅವರ ಮೇರಾ ನಾಮ್‌ ಜೋಕರ್‌ ಸಿನಿಮಾ ಬಂದ ಬಳಿಕ ನಕಲಿ ಶ್ಯಾಮರ ಬಗ್ಗೆ ಇದ್ದ ಭಾವನೆಯೇ ಬದಲಾಗಿ ಹೋಯ್ತು. ಅಳು ನುಂಗಿ ನಗುವ, ನಗಿಸುವ ಅವರ ಬಗ್ಗೆ ಅಪಾರ ಗೌರವ ಮೂಡಿಸುವ ಚಿತ್ರ ಅದು. ಜಗವೆಲ್ಲ ನಗುತ್ತಿರಲಿ, ಜಗದಳಲು ನನಗಿರಲಿ ಎನ್ನುವವರು ನಕಲಿಶ್ಯಾಮರು.