*ಸೋಲನ್ನು ಒಪ್ಪಿಕೊಳ್ಳಲಾಗದ ದೊಡ್ಡಸ್ಥಿಕೆ ಇದು

ಬ್ಬ ಜಟ್ಟಿ ಇದ್ದನಂತೆ. ಕುಸ್ತಿ ನಡೆಯಿತು. ಎದುರಾಳಿ ಅವನನ್ನು ಎತ್ತಿ ಒಗೆದು ಚಿತ್‌ ಮಾಡಿಬಿಟ್ಟ. ಅಖಾಡಾದಿಂದ ಹೊರಕ್ಕೆ ಬಂದ ಸೋತ ಜಟ್ಟಿ, ನನ್ನನ್ನೇನೋ ಅವನು ಕೆಳಕ್ಕೆ ಹಾಕಿದ. ಆದರೆ ನನ್ನ ಮೀಸೆಗೆ ಮಾತ್ರ ಮಣ್ಣು ಹತ್ತಲಿಲ್ಲ ಎಂದು ತನ್ನ ಪೊಗದಸ್ತಾದ ಮೀಸೆಯ ಮೇಲೆ ಕೈಯಾಡಿಸಿಕೊಂಡನಂತೆ.
ರಾಜಕಾರಣಿಗಳು ಚುನಾವಣೆಯ ಫಲಿತಾಂಶ ಬಂದ ಬಳಿಕ ತಮ್ಮ ಸೋಲನ್ನು ವಿಶ್ಲೇಷಿಸುವುದನ್ನು ಕೇಳಿದಾಗ ಈ ಮಾತು ನೆನಪಾಗುತ್ತದೆ. ತಮಗೆ ಸ್ಥಾನಗಳು ಕಡಿಮೆ ಬಂದಿವೆ ನಿಜ, ಆದರೆ ಪಡೆದ ಮತಗಳ ಶೇಕಡಾವಾರು ಪ್ರಮಾಣ ಹೆಚ್ಚಿದೆ. ಒಂದು ಜಾತಿ ವರ್ಗದವರಲ್ಲಿ ತಮ್ಮ ಪಕ್ಷದ ಜನಪ್ರಿಯತೆ ಹೆಚ್ಚಿದೆ, ಯಾವುದೋ ಒಂದು ಪ್ರದೇಶದಲ್ಲಿ ಪಕ್ಷದ ಬೇರುಗಳು ಗಟ್ಟಿಯಾಗಿವೆ ಎಂದೆಲ್ಲ ಹೇಳಿಕೆ ನೀಡುತ್ತಾರೆ.
ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ಎಲ್ಲ ಕ್ಷೇತ್ರದಲ್ಲೂ ಸೋಲನ್ನು ಸ್ವೀಕರಿಸದ ಪ್ರಭೃತಿಗಳು ಇದ್ದಾರೆ. ಸೋಲು ಯಾರಿಗೂ ಪ್ರಿಯವಲ್ಲ.