*ಇದು ಮಹಾಭಾರತದ ಹದಿನೆಂಟು ದಿನಗಳ ಯುದ್ಧ

ನೋ ಒಂದನ್ನು ತುಂಬ ಕಷ್ಟಪಟ್ಟು ಸಾಧಿಸಿಕೊಂಡವರು ತಮ್ಮ ಸಾಧನೆಯ ಕಷ್ಟದ ಹಾದಿಯ ಬಗ್ಗೆ ಹೇಳುವಾಗ `ಏಳು ಹನ್ನೊಂದು ಆಯ್ತು' ಎಂದು ಹೇಳುವುದನ್ನು ಕೇಳಿದ್ದೇವೆ. ಸಾಧನೆಯ ಹಾದಿ ಹೂವಿನದಲ್ಲ, ಕಲ್ಲು ಮುಳ್ಳಿನಿಂದ ಕೂಡಿದ್ದು. ಆದನ್ನು ಸಾಧಿಸಿಯೇ ಬಿಟ್ಟೆ ಎಂದು ಹೆಚ್ಚಳವನ್ನು ಹೇಳಿಕೊಳ್ಳುವುದು ಅವರ ಉದ್ದೇಶ. ಏಳು ಹನ್ನೊಂದು’ ಅಂದರೆ ಏನು? ಮಹಾಭಾರತದಲ್ಲಿ ಕೌರವ ಪಾಂಡವರಿಗೆ ಯುದ್ಧ ಸಂಭವಿಸುತ್ತದೆಯಲ್ಲವೆ? ಆಗ ಪಾಂಡವರ ಕಡೆಯಲ್ಲಿ ಏಳು ಅಕ್ಷೋಹಿಣಿ ಸೈನ್ಯ ಮತ್ತು ಕೌರವರ ಕಡೆ ಹನ್ನೊಂದು ಅಕ್ಷೋಹಿಣಿ ಸೈನ್ಯವಿತ್ತು. ಎರಡೂ ಕಡೆಯೂ ಯುದ್ಧ ಸಂಭವಿಸಿ ಕೊನೆಗೆ ಎಲ್ಲರೂ ನಾಶವಾಗಿ ಪಾಂಡವರು ಮಾತ್ರ ಉಳಿಯುತ್ತಾರೆ.
ದೊಡ್ಡ ಸೈನ್ಯದ ವಿರುದ್ಧ ಸಣ್ಣ ಸೈನ್ಯದ ಗೆಲವು ಅದು. ಕೆಟ್ಟದ್ದರ ವಿರುದ್ಧ ಒಳ್ಳೆಯದರ ಗೆಲವು ಅದು. ತಮ್ಮ ಸಾಧನೆಯೂ ಅದೇ ರೀತಿಯದು ಎಂದು ಒತ್ತಿ ಹೇಳುವುದಕ್ಕೆ ಈ `ಏಳು ಹನ್ನೊಂದು’ ಬಳಕೆಯಾಗುತ್ತದೆ.
ಏಳು ಮತ್ತು ಹನ್ನೊಂದು ಸೇರಿದರೆ ಹದಿನೆಂಟು. ಮಹಾಭಾರತದಲ್ಲಿ ಹದಿನೆಂಟಕ್ಕೆ ಬಹಳ ಮಹತ್ವ. ಸೇನೆಯು ಹದಿನೆಂಟು ಅಕ್ಷೋಹಿಣಿ. ಯುದ್ಧ ನಡೆದ ದಿನಗಳು ಹದಿನೆಂಟು, ಮಹಾಭಾರತದ ಪರ್ವಗಳು ಹದಿನೆಂಟು, ಅದರಲ್ಲಿಯ ಭಗವದ್ಗೀತೆಯ ಅಧ್ಯಾಯಗಳು ಹದಿನೆಂಟು ಇತ್ಯಾದಿ ಇತ್ಯಾದಿ.