*ಮಕ್ಕಳಾಟದಿಂದ ದೊಡ್ಡವರಾಟದ ತನಕ

ನ್ನ ಸಾಮರ್ಥ್ಯವನ್ನು ತೋರಿಸುವಲ್ಲಿ ವಿಫಲನಾದ ವ್ಯಕ್ತಿ, ತಂಡದಲ್ಲಿದ್ದೂ ತಂಡದ ಒಟ್ಟಾರೆ ಪ್ರದರ್ಶನಕ್ಕೆ ಮಹತ್ವದ ಕಾಣಿಕೆ ನೀಡಲು ಅಸಮರ್ಥನಾದ ವ್ಯಕ್ತಿಯನ್ನು ಕುರಿತು, `ಆತ ಆಟಕ್ಕುಂಟು ಲೆಕ್ಕಕ್ಕಿಲ್ಲ' ಎಂದು ಹೇಳುವುದನ್ನು ಕೇಳಿದ್ದೇವೆ. ವ್ಯಕ್ತಿ ಆಟಕ್ಕಿದ್ದಾನೆ ಎಂದು ಯಾವಾಗ ಪರಿಗಣಿತನಾಗುತ್ತಾನೆ? ಅವನಿಂದ ಮಹತ್ವದ ಕೊಡುಗೆತಂಡಕ್ಕೆ ದೊರೆತಾಗ ಮಾತ್ರ. ಕೇವಲ ತಲೆ ಎಣಿಕೆಯಾದರೆ ಅದರಿಂದ ಪ್ರಯೋಜನವಿಲ್ಲ. ಲೆಕ್ಕದಲ್ಲಿ ಸೇರಬೇಕೆಂದರೆ ಮಹತ್ವದ ಕೊಡುಗೆ ಕೊಡಲೇ ಬೇಕಾಗುತ್ತದೆ. ಇಲ್ಲದಿದ್ದರೆ ತಂಡದಿಂದಲೂ ಹೊರಬೀಳುವ ಅಪಾಯ ಇರುತ್ತದೆ. ಕಲವು ಕ್ರೀಡೆಗಳಲ್ಲಿ ಎಲ್ಲ ಪಂದ್ಯಗಳು ಮುಗಿಯುವ ಮುಂಚೆಯೇ ಸರಣಿ ಯಾರಿಗೆಂದು ನಿರ್ಧಾರವಾಗಿಬಿಟ್ಟರೆ ಉಳಿದ ಪಂದ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದು ಹೇಳುತ್ತಾರೆ. ಚಿಕ್ಕ ಮಕ್ಕಳು ಆಡುವುದನ್ನು ಗಮನಿಸಿದ್ದೀರಾ? ಮಕ್ಕಳ ನಡುವೆ ಇನ್ನೂ ಪುಟ್ಟದಾದ ಮಗುವೊಂದು ಇರುತ್ತದೆಯ ಮಕ್ಕಳು ಎರಡು ತಂಡವನ್ನು ಮಾಡಿಕೊಂಡು ಆಡುತ್ತವೆ. ಆ ಚಿಕ್ಕ ಮಗುವನ್ನು ಯಾವ ತಂಡಕ್ಕೆ ಸೇರಿಸುವುದು? ಯಾವುದಾದರೂ ಒಂದು ತಂಡದಲ್ಲಿ ಆ ಮಗುವಿಗೂ ಸ್ಥಾನ ಕಲ್ಪಿಸುತ್ತಾರೆ.`ಅವ್ನು ಆಟಕ್ಕಿದ್ದಾನೆ, ಲೆಕ್ಕಕ್ಕಿಲ್ಲ’ ಎಂದು ಮೊದಲೇ ಘೋಷಿಸಿಬಿಡುತ್ತಾರೆ.
ಮಕ್ಕಳ ಆಟದ ಈ ಮಾತು ಇಂದು ದೊಡ್ಡವರ ಆಟಕ್ಕೂ, ಆಟವನ್ನು ಮೀರಿಯೂ ಬಳಕೆಯಾಗುತ್ತಿದೆ.