*ಅಧಿಕಾರದಿಂದ ತೆಗೆದುಹಾಕುವುದು

ದುಕಿನ ಏಳುಬೀಳುಗಳನ್ನು ಸಂಕೇತಿಸುತ್ತಾನೆ. ಚಂದ್ರ ಶುಕ್ಲಪಕ್ಷದಲ್ಲಿ ದೊಡ್ಡವನಾಗುತ್ತ ಹೋಗಿ ಹುಣ್ಣಿಮೆಯ ದಿನ ಪೂರ್ಣಚಂದ್ರನಾಗುತ್ತಾನೆ. ಕೃಷ್ಣಪಕ್ಷದಲ್ಲಿ ಕೃಶಗೊಳ್ಳುತ್ತ ಹೋಗುವ ಚಂದ್ರ ಅಮಾವಾಸ್ಯದ ದಿನ ಮಾಯವಾಗಿಬಿಡುತ್ತಾನೆ.
ಕಷ್ಟ ಸುಖಗಳು ಒಂದೇ ರೀತಿ ಇರುವುದಿಲ್ಲ ಎಂಬ ತತ್ವವನ್ನು ಸಾಂತ್ವನಕ್ಕಾಗಿ ಹೇಳುವಾಗ ಚಂದ್ರನ ಉದಾಹರಣೆ ತೆಗೆದುಕೊಳ್ಳುತ್ತಾರೆ.
ಇನ್ನು, ಯಾರಾದರೂ ಸಚಿವರನ್ನು ಸಂಪುಟದಿಂದ ಕೈಬಿಟ್ಟಾಗ ಆ ಸಚಿವರಿದೆ ಅರ್ಧಚಂದ್ರ ಪ್ರಯೋಗವಾಗಿದೆ ಎಂದು ಪತ್ರಿಕೆಗಳಲ್ಲಿ ಬಳಸುತ್ತಾರೆ. ಅರ್ಧಚಂದ್ರ ಅಧಿಕಾರ ಕ್ಷಯದ ಸಂಕೇತ ಇಲ್ಲಿ.
ಹಿಂದೆ ಧನುರ್ಬಾಣಗಳಲ್ಲಿ ಯುದ್ಧವನ್ನು ಮಾಡುತ್ತಿದ್ದಾಗ ಅರ್ಧಚಂದ್ರಾಕೃತಿಯ ಬಾಣವನ್ನು ಪ್ರಯೋಗಿಸುತ್ತಿದ್ದರು. ಎದುರಾಳಿಯ ತಲೆ ತೆಗೆದು ನಾಶಗೊಳಿಸುವ ಉದ್ದೇಶದಿಂದ ಪ್ರಯೋಗಿಸುವ ಅಸ್ತ್ರ ಅದು. ಅಧಿಕಾರದಿಂದ ಇಳಿಸುವುದೆಂದರೂ ಆ ವ್ಯಕ್ತಿಯ ವಿನಾಶವೇ. ತಲೆದಂಡವೇ.
ಈ ಹಿನ್ನೆಲೆಯಲ್ಲಿಯೇ ಪದವಿಚ್ಯುತನಾಗುವ ವ್ಯಕ್ತಿಯ ಮೇಲೆ ಅರ್ಧಚಂದ್ರ ಪ್ರಯೋಗವಾಗಿದೆ ಎಂದು ಹೇಳುವುದ ರೂಢಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಇದರ ಬಳಕೆ ಕಡಿಮೆಯಾಗುತ್ತಿದೆ.