ಕಾದಂಬರಿ

ಬಲೆ

ಕಾದಂಬರಿ ಬಲೆ ನಾನು ಬರೆದ ಮೊದಲ ಕಾದಂಬರಿ. ಎಂ.ಎ. ಅಂತಿಮ ವರ್ಷದಲ್ಲಿ ಸೃಜನ ಸಾಹಿತ್ಯದ ಪತ್ರಿಕೆಗೆ ಡೆಸರ್ಟೇಷನ್‌ಗಾಗಿ ಬರೆದ ಕಾದಂಬರಿ ಇದು. ನಮ್ಮ ಗುರುಗಳಾಗಿದ್ದ ಡಾ.ಬುದ್ದಣ್ಣಹಿಂಗಮಿರೆಯವರ ಪ್ರೋತ್ಸಾಹ ಇದಕ್ಕೆ ಕಾರಣ. ನಮ್ಮ ಗುರುಗಳೂ ಮತ್ತು ವಿಭಾಗದ ಮುಖ್ಯಸ್ಥರೂ ಆಗಿದ್ದ ಡಾ.ಎಂ.ಎಂ. ಕಲಬುರ್ಗಿಯವರೂ ಇದನ್ನು ಮೆಚ್ಚಿಕೊಂಡಿದ್ದರು.. ಇದು 1984ರಲ್ಲಿ. ನಂತರ ಇದನ್ನು ಹೊನ್ನಾವರ ಕಾಲೇಜಿನಲ್ಲಿ ನನ್ನ ಗುರುಗಳಾಗಿದ್ದ ಜಿ.ಎಸ್. ಅವಧಾನಿಯವರ ಸಹಾಯದಿಂದ, ಹಿರಿಯ ಪತ್ರಕರ್ತ ಜಿ.ಯು.ಭಟ್‌ ಅವರ ಪ್ರೋತ್ಸಾಹದಿಂದ ಕರಾವಳಿ ಗ್ರಾಮವಿಕಾಸ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ನಂತರ ಇದನ್ನು...

ಕ್ಷಯ

1 ಶ್ರೀನಿವಾಸ ನಾಯ್ಕ ಸೊಂಟದಲ್ಲಿ ಕಸು ಸಿಕ್ಕಿದ ಹಾಗೆ ಆಗಿ ಬೆನ್ನು ನೆಟ್ಟಗೆ ಮಾಡಿ ನಿಂತ. ಅವನ ಎಡಗೈ ಹಸ್ತ ಬೆನ್ನನ್ನು ನೀವುತ್ತಿರುವಾಗಲೆ ಹೊಟ್ಟೆಯ ತಳದಿಂದ ಎದ್ದು ಬಂದ ಹಾಗೆ ಕೆಮ್ಮು ಬರತೊಡಗಿತು. ಪಿಕಾಸು ಹಿಡಿದ ಬಲಗೈ ಹಸ್ತ ಅದನ್ನು ಬಿಟ್ಟು ಎದೆಯ ಮೇಲೆ ಆಡತೊಡಗಿತು. ಕೆಮ್ಮುವುದು ನಿಂತಮೇಲೆ ಕ್ಯಾಕರಿಸಿದ. ಅರ್ಧ ಉಗುಳು, ಅರ್ಧ ಕಫವನ್ನು ಥೂ ಎಂದು ಜೋರಾಗಿ ಉಗುಳಿದ. ಮಣ್ಣಿನ ಮೇಲೆ ಬಿದ್ದು ಘನೀಭವಿಸುತ್ತಿದ್ದ ಕಫವನ್ನು ನೋಡುತ್ತ ನಾಲ್ಕೈದು ಸಲ ನೀಳ ಉಸಿರನ್ನು ಎಳೆದುಕೊಂಡ....