ಕ್ಷಯ

1 ಶ್ರೀನಿವಾಸ ನಾಯ್ಕ ಸೊಂಟದಲ್ಲಿ ಕಸು ಸಿಕ್ಕಿದ ಹಾಗೆ ಆಗಿ ಬೆನ್ನು ನೆಟ್ಟಗೆ ಮಾಡಿ ನಿಂತ. ಅವನ ಎಡಗೈ ಹಸ್ತ ಬೆನ್ನನ್ನು ನೀವುತ್ತಿರುವಾಗಲೆ ಹೊಟ್ಟೆಯ ತಳದಿಂದ ಎದ್ದು ಬಂದ ಹಾಗೆ ಕೆಮ್ಮು ಬರತೊಡಗಿತು. ಪಿಕಾಸು ಹಿಡಿದ ಬಲಗೈ ಹಸ್ತ ಅದನ್ನು ಬಿಟ್ಟು ಎದೆಯ ಮೇಲೆ ಆಡತೊಡಗಿತು. ಕೆಮ್ಮುವುದು ನಿಂತಮೇಲೆ ಕ್ಯಾಕರಿಸಿದ. ಅರ್ಧ ಉಗುಳು, ಅರ್ಧ ಕಫವನ್ನು ಥೂ ಎಂದು ಜೋರಾಗಿ ಉಗುಳಿದ. ಮಣ್ಣಿನ ಮೇಲೆ ಬಿದ್ದು ಘನೀಭವಿಸುತ್ತಿದ್ದ ಕಫವನ್ನು ನೋಡುತ್ತ ನಾಲ್ಕೈದು ಸಲ ನೀಳ ಉಸಿರನ್ನು ಎಳೆದುಕೊಂಡ....